Strict Action On Those Who Supply Poor Quality Food To Anganwadi Centers: Minister | Vijay Karnataka

Strict Action On Those Who Supply Poor Quality Food To Anganwadi Centers: Minister | Vijay Karnataka

ಹಾಸನ: ಏನಾದರೂ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಕಠಿಣ ಕ್ರಮ ಹಾಗೂ ಮರಳು ದಂಧೆ ಕೋರರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿದರು.

ಹಾಸನದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಲವೆಡೆ ಅಂಗನವಾಡಿಗಳಿಗೆ ಕಳಪೆ ಹಾಗೂ ಅವಧಿ ಮೀರಿದ ಪೌಷ್ಟಿಕ ಆಹಾರ ಸರಬರಾಜು ಮಾಡಿರುವ ಸಂಬಂಧ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹೇಳಿದ್ದೇನೆ ಎಂದರು.

ರಾಜ್ಯದ ಹಿಂದುಳಿದ ತಾಲೂಕುಗಳಿಗೆ 1 ಸಾವಿರ ಅಂಗನವಾಡಿ ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ. ಅಂಗನವಾಡಿಗಳಲ್ಲಿ ಗರ್ಬಿಣಿ ಹಾಗೂ ಬಾಣಂತಿಯರಿಗೆ​ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೆ ಮಲೆನಾಡು ಭಾಗದ 5-6 ಜಿಲ್ಲೆಗಳಲ್ಲಿ ಈ ಯೋಜನೆ ಸದುಯೋಗವಾಗುತ್ತಿಲ್ಲ. ಈ ಹಿನ್ನೆಲೆ 5-6 ಜಿಲ್ಲೆಗಳಲ್ಲಿ ಬಿಸಿಯೂಟದ ಬದಲು ಮನೆಗೆ ಆಹಾರ ಧಾನ್ಯ ನೀಡಲು ಚಿಂತನೆ ನಡೆಸಲಾಗುವುದು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ಹಾಗೂ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿತ್ತು. ಈ ಯೋಜನೆಯನ್ನು ರಾಜ್ಯದ ಎಲ್ಲಾ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ನಾನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಬಳಿಕ, ಜಲ್ಲಿ, ಮರಳು, ಪೂರಕ ಸಾಮಗ್ರಿಗಳನ್ನು ಪೂರೈಸಲು ಸಾಕಷ್ಟು ಬದಲಾವಣೆ ತರಲಾಗುತ್ತಿದೆ. ಹೊಸ ಮರಳು ನೀತಿ ಜಾರಿಗೆ ತಂದು ಮರಳು ಬ್ಲಾಕ್ ಗಳನ್ನು ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ಗೆ ವಹಿಸಿ ಒಂದು ಟನ್ ಮರಳನ್ನು 700 ರಿಂದ 800 ರೂ.ಗೆ ನೀಡಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಶಾಸಕರಿಂದ ದೂರುಗಳು ಬಂದಿವೆ. ಪೊಲೀಸರೇ ಮರಳು ದಂಧೆಕೋರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

​ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ಸಿಇಓ ಕಾಂತರಾಜ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ಇತರರು ಉಪಸ್ಥಿತರಿದ್ದರು.

#anganwadi #Halappaachar #hassan

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

halappa acharanganwadihassan news

Post a Comment

0 Comments